ಕಾಫಿನಾಡು ಚಿಕ್ಕಮಗಳೂರಿನಲ್ಲಿ ಆನೆ ಉಪಟಳ ಮುಂದುವರೆದಿದ್ದು, 45 ಕಾಡಾನೆಗಳ ಹಿಂಡು ಜನವಸತಿ ಪ್ರದೇಶ, ಕಾಫಿ ತೋಟದಲ್ಲಿ ಓಡಾಡುತ್ತಿವೆ. ಬೇಲೂರು ಭಾಗದಿಂದ ಬಂದಿರುವ ಬೀಟಮ್ಮ, ಭೀಮಾ ಗ್ಯಾಂಗ್, ಮೂಡಿಗೆರೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಂಡುಬಂದಿದ್ದು, ಮನೆ ತನಕ ಬಂದಿವೆ. ಇದರಿಂದ ಗಡಿಚೌಕ ಗ್ರಾಮದ ಜನರಲ್ಲಿ ಆತಂಕ ಮನೆಮಾಡಿದೆ.