ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಿಪಬ್ಲಿಕ್ ಆಫ್ ಪೋಲೆಂಡ್ನ ಗೌರವಾನ್ವಿತ ರಾಯಭಾರಿ ಪ್ರೊ. ಆಡಮ್ ಬುರಾಕೋವ್ಸ್ಕಿ ಹಾಗೂ 'TZmo' ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಅಲೀನಾ ಪೋಕೋವ್ಸ್ಕಾ ಅವರನ್ನೊಳಗೊಂಡ ನಿಯೋಗವು ಭೇಟಿ ಮಾಡಿತು. ಈ ಉನ್ನತ ಮಟ್ಟದ ಸಭೆಯಲ್ಲಿ ಹೂಡಿಕೆ, ಕೈಗಾರಿಕೆ ಹಾಗೂ ಪರಸ್ಪರ ಸಹಕಾರದ ಸಾಧ್ಯತೆಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಲಾಯಿತು.