ಬೇಸಗೆಯಲ್ಲಿ ಆರೋಗ್ಯಕರ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ. ಆದರೆ ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂಬುದು ಮಾತ್ರ ತಿಳಿಯುವುದಿಲ್ಲ. ಏಕೆಂದರೆ ದಿನನಿತ್ಯವೂ ಬಗೆ ಬಗೆಯ ಆಹಾರ ಸೇವನೆ ಮಾಡಬೇಕು ಮತ್ತು ಅದು ರುಚಿಯಾಗಿಯೂ ಇರಬೇಕು ಎಂದರೆ ಅದು ಬಹಳ ಕಷ್ಟ. ನಿಮಗೂ ಈ ರೀತಿಯ ಸಮಸ್ಯೆ ಇದ್ದಲ್ಲಿ ಈ ಒಂದು ರೆಸಿಪಿಯನ್ನು ತಪ್ಪದೆ ಮಾಡಿ ನೋಡಿ. ಈ ಕ್ವಿನೋವಾ ಕೋಸಂಬರಿ ಸಲಾಡ್ ರೆಸಿಪಿಯನ್ನು swaadista ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಮಾಡುವುದಕ್ಕೂ ಸುಲಭ ಜೊತೆಗೆ ರುಚಿಯು ಸಕತ್ ಆಗಿರುತ್ತೆ.