ಯುಗಾದಿ ಹಬ್ಬದ ಪ್ರಯುಕ್ತ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರಿನ ಇತಿಹಾಸ ಪ್ರಸಿದ್ಧ ಶ್ರೀಮದನಘಟ್ಟ ಮಾರಮ್ಮನಿಗೆ ಹೋಳಿಗೆ ಅಲಂಕಾರ ಮಾಡಲಾಗಿದೆ. ಹಬ್ಬದ ಪ್ರಯುಕ್ತ 350 ಹೋಳಿಗೆಗಳಿಂದ ತಾಯಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ವಿಶೇಷ ಪೂಜೆ ಮತ್ತು ಪುನಸ್ಕಾರಗಳು ದೇಗುಲದಲ್ಲಿ ನಡೆವಿದೆ. ಹಬ್ಬದ ದಿನ ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ದೇವಿಯನ್ನು ನೂರಾರು ಭಕ್ತರು ಕಣ್ಣುತುಂಬಿಕೊಂಡಿದ್ದಾರೆ.