ವೀಕೆಂಡ್ ಬಂತು ಅಂದ್ರೆ ಸಾಕು ಮಕ್ಕಳಿಗೆ ಏನ್ ತಿಂಡಿ ಮಾಡಿಕೊಡೋದು ಅಂತಾ ಅಮ್ಮಂದಿರಿಗೆ ತಲೆ ಬಿಸಿಯಾಗುವುದು ಸಾಮಾನ್ಯ. ಆದರೆ ಸುಲಭವಾಗಿ ಹತ್ತೇ ನಿಮಿಷದಲ್ಲಿ ತಯಾರಾಗುವ ರೆಸಿಪಿ ಸಿಕ್ಕರೆ ಎಷ್ಟು ಖುಷಿ ಆಗುತ್ತೆ ಅಲ್ವಾ? ಈ ರೀತಿ ನಿಮಗೂ ಆಗುತ್ತಿದ್ದರೆ official_tabbushekh_cook ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ರೆಸಿಪಿ ಯನ್ನು ನೀವೊಮ್ಮೆ ಟ್ರೈ ಮಾಡಲೇ ಬೇಕು. ಇದು ಮಕ್ಕಳಿಗೆ ಇಷ್ಟವಾಗುವ ಆಹಾರ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಅಷ್ಟೇ ಅಲ್ಲ, ಬಹುಬೇಗನೆ ತಯಾರಾಗುತ್ತದೆ ಜೊತೆಗೆ ಹೆಚ್ಚು ಪದಾರ್ಥಗಳನ್ನು ಬಳಸುವ ಅವಶ್ಯಕೆತೆಯೂ ಇರುವುದಿಲ್ಲ. ಹಾಗಿದ್ರೆ ಇನ್ನೇಕೆ ತಡ ನೀವು ಒಮ್ಮೆ ಟ್ರೈ ಮಾಡಿ.