ಕಡಲೆ ಮತ್ತು ಹಸಿರು ತರಕಾರಿಗಳನ್ನು (ಸೌತೆಕಾಯಿ, ಟೊಮೆಟೊ, ಈರುಳ್ಳಿ) ಬಳಸಿ ತಯಾರಿಸುವ ಸಲಾಡ್ಗಳು ಪ್ರೋಟೀನ್ ಮತ್ತು ಫೈಬರ್ನ ಮೂಲಗಳಾಗಿವೆ. ಇದಕ್ಕೆ ನಿಂಬೆ ರಸ, ಆಲಿವ್ ಎಣ್ಣೆ, ಮತ್ತು ಜೀರಿಗೆ ಪುಡಿಯಿಂದ ಡ್ರೆಸ್ಸಿಂಗ್ ಮಾಡಿದರೆ ರುಚಿ ದುಪ್ಪಟ್ಟಾಗುತ್ತದೆ, ಅಷ್ಟೇ ಅಲ್ಲ ಇವು ತೂಕ ನಿರ್ವಹಣೆ ಮತ್ತು ಜೀರ್ಣಕ್ರಿಯೆಗೆ ಉತ್ತಮ ಆಹಾರವಾಗಿದೆ. ಈ ಸಿಂಪಲ್ ರೆಸಿಪಿಯನ್ನು dira.cooking ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.