ಉಪ್ಪಿನಕಾಯಿ ಮಾಡುವುದಕ್ಕೆ ದಿನಗಟ್ಟಲೆ ಸಮಯ ಕಳೆಯುವ ದಿನಗಳು ಮುಗಿದುಹೊಯ್ತು. ಇನ್ನೇನಿದ್ದರೂ 10 ನಿಮಿಷದಲ್ಲಿ ಮಾಡಿ ಸವಿಯಬಹುದು. ಅದರಲ್ಲಿಯೂ ಉಪ್ಪಿನಕಾಯಿ ಪ್ರೀಯರಿಗೆ ಒಂದೇ ಬಗೆಯ ರುಚಿ ನೋಡುವ ಅವಶ್ಯಕತೆಯೂ ಇಲ್ಲ. uchils.kitchen ಎಂಬ ಇನ್ಸ್ಟಾ ಖಾತೆಯಲ್ಲಿ ಮಂಗಳೂರು ಸೌತೆಕಾಯಿಯಿಂದ ಉಪ್ಪಿನಕಾಯಿ ಮಾಡುವ ವಿಧಾನವನ್ನು ಹಂಚಿಕೊಂಡಿದ್ದು ಕೇವಲ 10 ನಿಮಿಷದಲ್ಲಿ ಇದನ್ನು ಮಾಡಿ ಸವಿಯಬಹುದಾಗಿದೆ. ಹಾಗಿದ್ರೆ ಇನ್ನೇಕೆ ತಡ ನೀವು ಒಮ್ಮೆ ಟ್ರೈ ಮಾಡಿ ನೋಡಿ. ರುಚಿ ಚೆನ್ನಾಗಿದ್ರೆ ಮತ್ತೆ ಮತ್ತೆ ಮಾಡಿ ತಿನ್ನಬಹುದು.