ಸಾಮಾನ್ಯವಾಗಿ ಚಳಿಗಾಲದಲ್ಲಿ ಗರಿಗರಿಯಾಗಿ ಏನಾದರೂ ತಿನ್ನಬೇಕೆಂಬ ಮನಸ್ಸಾಗುವುದು ಸಹಜ. ಆದರೆ ಸರಳವಾಗಿ ಮಾಡುವ ರೆಸಿಪಿ ಇದ್ದರೆ ಬಹಳ ಒಳ್ಳೆಯದು. ಈ ರೀತಿ ನಿಮಗೂ ಅನ್ನಿಸುತ್ತಿದ್ದರೆ ಒಂದು ಸಿಂಪಲ್ ರೆಸಿಪಿ ಇಲ್ಲಿದೆ. ಇದನ್ನು themoodychef1995 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಬಹಳ ಈಜಿಯಾಗಿ ಮಾಡಬಹುದಾಗಿದೆ. ಮೂಲಂಗಿ ತಂದು ಅದರ ಸೊಪ್ಪನ್ನು ಬಿಸಾಡುವವರು ಈ ರೆಸಿಪಿಯನ್ನು ಟ್ರೈ ಮಾಡಲೆಬೇಕು. ಏಕೆಂದರೆ ಇದು ಮೂಲಂಗಿ ಸೊಪ್ಪಿನಿಂದ ಮಾಡಬಹುದಾದ ಪಕೋಡ ರೆಸಿಪಿಯಾಗಿದೆ. ಕೇಳುವುದಕ್ಕೆ ವಿಚಿತ್ರ ಎನಿಸಬಹುದು ಆದರೆ ಒಮ್ಮೆ ತಿಂದ್ರೆ ಮತ್ತೆ ಮತ್ತೆ ಮಾಡಿ ತಿನ್ನುವುದರಲ್ಲಿ ಸಂಶಯವೇ ಇಲ್ಲ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.