ರಾಗಿ ಅಂಬಲಿ (ರಾಗಿ ಗಂಜಿ) ಕರ್ನಾಟಕದ ಸಾಂಪ್ರದಾಯಿಕ ಮತ್ತು ಅತ್ಯಂತ ಪೌಷ್ಟಿಕ ಆಹಾರ ಅಥವಾ ಪಾನೀಯ. ರಾಗಿ ಹಿಟ್ಟು, ಮಜ್ಜಿಗೆ/ಮೊಸರು ಬಳಸಿ ತಯಾರಿಸುವ ಇದು ದೇಹಕ್ಕೆ ತಂಪನ್ನು ನೀಡುತ್ತದೆ. ಬೇಸಿಗೆಯಲ್ಲಿ ಅಥವಾ ಉಪಹಾರಕ್ಕೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಬೇಸಿಗೆ ಮುಗಿಯುವುದರೊಳಗೆ ಇದನ್ನು ಒಮ್ಮೆ ಮಾಡಿ ಸವಿಯಲೇ ಬೇಕು. ಆರೋಗ್ಯಕ್ಕೆ ಬಹಳ ಒಳ್ಳೆಯದಾದ್ದರಿಂದ ಮಕ್ಕಳಿಂದ ಹಿಡಿದು ವಯಸ್ಸಾದವರೂ ಕೂಡ ಕುಡಿದು ಆನಂದಿಸಬಹುದು. ಹಾಗಾದರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ. ಇದನ್ನು ಸುಲಭವಾಗಿ ಮಾಡುವ ರೆಸಿಪಿಯನ್ನು the_aromatic_plate ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.