ಸಾಮಾನ್ಯವಾಗಿ ಬೆಳಗ್ಗಿನ ತಿಂಡಿ ಅಥವಾ ಸಂಜೆಯ ಆರೋಗ್ಯಕರ ಸ್ನಾಕ್ಸ್ ಗೆ ರಾಗಿ ಬೀಟ್ರೂಟ್ ತಾಲಿಪಟ್ಟು ಬೆಸ್ಟ್ ರೆಸಿಪಿ. ಇದೊಂದು ಪೌಷ್ಟಿಕಾಂಶಭರಿತ, ಫೈಬರ್ ಮತ್ತು ಕಬ್ಬಿಣಾಂಶದಿಂದ ಕೂಡಿದ ಆರೋಗ್ಯಕರ ಉಪಹಾರವಾಗಿದ್ದು ತುರಿದ ಬೀಟ್ರೂಟ್, ರಾಗಿ ಹಿಟ್ಟು, ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಮಸಾಲೆಗಳನ್ನು ಬಳಸಿ ಇದನ್ನು ತಯಾರಿಸಬಹುದಾಗಿದೆ. ಇದು ಮಧುಮೇಹಿಗಳಿಗೆ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದ್ದು, ಚಟ್ನಿ ಅಥವಾ ಮೊಸರಿನೊಂದಿಗೆ ಸವಿಯಲು ರುಚಿಕರವಾಗಿರುತ್ತದೆ. ಈ ರೆಸಿಪಿಯನ್ನು eatwithaishwarya ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.