ರಾಯಚೂರಿನ ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ರಾಜಶೇಖರ್ ನಾಯಕ್ ಅವರು ತಮ್ಮ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ಪತ್ರ ಕಳುಹಿಸಿದ್ದರು. ಇದಕ್ಕೆ ಪ್ರತಿಯಾಗಿ, ಪ್ರಧಾನಿ ಮೋದಿ ಕಚೇರಿಯಿಂದ ನವ ಜೋಡಿ ರಾಜಶೇಖರ್ ಮತ್ತು ಸವಿತಾ ಅವರಿಗೆ ಶುಭಾಶಯ ಪತ್ರ ಬಂದಿದ್ದು, ಇದು ಎಲ್ಲರ ಗಮನ ಸೆಳೆದಿದೆ.