ರಾಜಭೋಗ್ ಐಸ್ ಕ್ರೀಮ್ ಅತ್ಯಂತ ಜನಪ್ರಿಯ ಐಸ್ ಕ್ರೀಮ್ ಫ್ಲೇವರ್ ಗಳಲ್ಲಿ ಒಂದು. ಹಾಲಿನ ಕೆನೆ, ಕೇಸರ, ಬಾದಾಮಿ, ಗೋಡಂಬಿ, ಪಿಸ್ತಾ ಮತ್ತು ಏಲಕ್ಕಿಯ ಸುವಾಸನೆಯನ್ನು ಒಳಗೊಂಡಿರುವ ಇದು ಅದ್ಭುತವಾದ ರುಚಿಯನ್ನು ನೀಡುತ್ತದೆ. ಇದು ಜನಪ್ರಿಯ ಆನ್ಲೈನ್ ಸ್ಟೋರ್ಗಳಲ್ಲಿ ಸುಲಭವಾಗಿ ಸಿಗುತ್ತದೆಯಾದರೂ ಕೂಡ ಇದನ್ನು ಖರೀದಿಸಿ ತಿನ್ನುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ತಿನ್ನಬಹುದು. ಇದನ್ನು ಮಾಡುವ ರೆಸಿಪಿಯನ್ನು yourfoodiescorner ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.