ರಾಮನಗರ ಜಿಲ್ಲೆಯ ಮಾಗಡಿ ಕೋಟೆ ಮೈದಾನದಲ್ಲಿ ಕೆಂಪೇಗೌಡ ಉತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ಭರ್ಜರಿ ಸ್ಟೆಪ್ ಹಾಕಿದರು. ಯುವತಿಯರು ಮತ್ತು ಮಕ್ಕಳೊಂದಿಗೆ ಸೇರಿ ಸಡಗರದಿಂದ ನೃತ್ಯ ಮಾಡಿದ ಶಾಸಕರು ಎಲ್ಲರ ಗಮನ ಸೆಳೆದರು. ಮಾಗಡಿಯ ಶಾಸಕರ ಈ ನೃತ್ಯ ಅಲ್ಲಿ ನೆರೆದಿದ್ದವರಲ್ಲಿ ಉತ್ಸಾಹ ತುಂಬಿ, ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿತು.