ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಚನ್ನಪಟ್ಟಣ ತಾಲ್ಲೂಕಿನ ಬಿವಿ ಹಳ್ಳಿ ಗ್ರಾಮದಲ್ಲಿ ಗುರುವಾರ ತಡರಾತ್ರಿ 2 ಕಾಡಾನೆಗಳು ದೊಡ್ಡೇಗೌಡ ಎಂಬುವವರ ಮನೆ ಬಳಿಗೇ ಬಂದಿವೆ. ಕಾಡಾನೆಗಳ ಕಂಡು ಗ್ರಾಮದಲ್ಲಿ ಆತಂಕ ಹೆಚ್ಚಾಗಿದ್ದು, ಅವುಗಳನ್ನು ಕಾಡಿಗೆ ಹಿಮ್ಮೆಟ್ಟಿಸುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಸದ್ಯ ಕಾಡಾನೆಗಳ ವಿಡಿಯೋ ವೈರಲ್ ಆಗುತ್ತಿದೆ.