ಕಲ್ಲುಗೋಪಳ್ಳಿ ಗ್ರಾಮಸ್ಥರು ಹತ್ತು ವರ್ಷಗಳಿಂದ ಚಿರತೆ ಭೀತಿಯಲ್ಲಿದ್ದಾರೆ. ರಾತ್ರಿ ವೇಳೆ ಗ್ರಾಮದ ಬೀದಿಗಳಲ್ಲಿ ರಾಜಾರೋಷವಾಗಿ ಚಿರತೆಗಳು ಓಡಾಡುತ್ತಿದ್ದು, ಸಾಕುನಾಯಿಗಳು ಹಾಗೂ ದನ-ಕರುಗಳ ಮೇಲೆ ದಾಳಿ ನಡೆಸುತ್ತಿವೆ. ರಾಮನಗರ ತಾಲ್ಲೂಕಿನ ಈ ಗ್ರಾಮದ ಜನರು ಸಂಜೆ ಆದ ಕೂಡಲೇ ಹೊರಬರಲು ಭಯಪಡುತ್ತಿದ್ದಾರೆ. ಚಿರತೆಗಳ ಗುಂಪನ್ನು ಸೆರೆ ಹಿಡಿದು ತಮ್ಮ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.