ರಿಷಬ್ ಶೆಟ್ಟಿ ಅವರು 'ಕಾಂತಾರ' ಯಶಸ್ಸಿನ ನಂತರ ಮಂಗಳೂರಿನ ಯೆಯ್ಯಾಡಿಯ ವಾರಾಹಿ ಪಂಜುರ್ಲಿ ನೇಮೋತ್ಸವದಲ್ಲಿ ಭಕ್ತಿಯಿಂದ ಹರಕೆ ತೀರಿಸಿದ್ದಾರೆ. 'ಕಾಂತಾರ ಚಾಪ್ಟರ್ 1' ಚಿತ್ರೀಕರಣಕ್ಕೂ ಮುನ್ನ ಪಂಜುರ್ಲಿ ದೈವದ ಅನುಮತಿ ಪಡೆದಿದ್ದರು. ದೈವದ ನಿಯಮ ಪಾಲಿಸಿ ಚಿತ್ರೀಕರಣಕ್ಕೆ ಮುಂದಾಗುವಂತೆ ಆಜ್ಞಾಪಿಸಲಾಗಿತ್ತು. ಇದೀಗ ನಟನು ದೈವಕ್ಕೆ ಕೃತಜ್ಞತೆ ಸಲ್ಲಿಸಿರುವ ವಿಡಿಯೋ ವೈರಲ್ ಆಗಿದೆ.