ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಲೀಂ ಅಹ್ಮದ್ ಅವರನ್ನು ನೂತನ ಸಭಾಪತಿಯಾಗಿ ಆಯ್ಕೆ ಮಾಡಲಾಗಿದೆ. ಪ್ರಸ್ತಾವದ ಪರವಾಗಿ 38 ಮತಗಳು ಬಂದಿದ್ದು, ವಿರುದ್ಧವಾಗಿ 30 ಮತಗಳು ಬಂದಿದ್ದವು. ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮ 7(5)ರ ಅನ್ವಯ ಬಿ.ಕೆ. ಹರಿಪ್ರಸಾದ್ ಮಂಡಿಸಿದ ಮತ್ತು ಡಾ. ಯತೀಂದ್ರ ಎಸ್. ಅನುಮೋದಿಸಿದ ಪ್ರಸ್ತಾವವು ಅಂಗೀಕೃತವಾಯಿತು.