ಖಾಕಿ ಕಸ್ಟಡಿಯಲ್ಲಿ ತಂದೆ, ಮಗ ಹತ್ಯೆ ಕೇಸ್ ಸಂಬಂಧ ತಮಿಳುನಾಡಿನ 9 ಪೊಲೀಸರಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ. ಕೊರೋನಾ ಲಾಕ್ಡೌನ್ ವೇಳೆ ಸಮಯ ಮೀರಿ ಮೊಬೈಲ್ ಅಂಗಡಿ ತೆರೆದಿದ್ರು ಆರೋಪಡಿ ತಂದೆ ಜಯರಾಜ್, ಪುತ್ರ ಬೆನಿಕ್ಸ್ನನ್ನ ಬಂಧಿಸಿದ್ರು. ಪೊಲೀಸರು ಹೊಡೆದ ಏಟಿಗೆ ಇಬ್ಬರು ಸಾವನ್ನಪ್ಪಿದ್ರು. ಲಾಕಪ್ ಡೆತ್ ಮುಚ್ಚಿಹಾಕಲು ಸುಳ್ಳು ಸಾಕ್ಷ್ಯ ಸೃಷ್ಟಿಸಿದ್ರು. ಕಸ್ಟಡಿಯಲ್ಲಿ ಹಿಂಸಾಚಾರ ಸಾಬೀತಾದ ಹಿನ್ನೆಲೆ ಮಧುರೈ ಜಿಲ್ಲಾ ಕೋರ್ಟ್ 9 ಪೊಲೀಸರಿಗೆ ಮರಣದಂಡನೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.