ಸಾಮಾನ್ಯವಾಗಿ ಮರುಭೂಮಿ ಎಂದರೆ ಸುಡುವ ಸೂರ್ಯ ಮತ್ತು ಮರಳು ದಿಬ್ಬಗಳು ನೆನಪಿಗೆ ಬರುತ್ತವೆ. ಆದರೆ ಸೌದಿ ಅರೇಬಿಯಾದಲ್ಲಿ ಇದೀಗ ಹಿಮಪಾತವಾಗುತ್ತಿದೆ. 30 ವರ್ಷಗಳ ಬಳಿಕ ಸೌದಿಯಲ್ಲಿ ಹಿಮಪಾತ ಉಂಟಾಗಿದೆ. ಸೌದಿ ಅರೇಬಿಯಾದ ಇತಿಹಾಸದಲ್ಲಿ ಈ ಅಪರೂಪದ ಬೆಳವಣಿಗೆ ಈಗ ಪ್ರಪಂಚದಾದ್ಯಂತ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ.