ಬಿಎಂಟಿಸಿ ಬಸ್ ಚಾಲಕನ ಎಡವಟ್ಟಿನಿಂದ ಸರಣಿ ಅಪಘಾತ ಸಂಭವಿಸಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಬಳಿಯ ಟಿವಿಎಸ್ ಸರ್ಕಲ್ನಲ್ಲಿ ಈ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಹಾಗೂ ಟಾಟಾ ಏಸ್ ನಡುವೆ ಬೈಕ್ ಸವಾರ ಸಿಲುಕಿದ್ದು, ಬೈಕ್ ನುಚ್ಚುನೂರಾಗಿದೆ. ಅದೃಷ್ಟವಶಾಥ್ ಸವಾರ ಬಚಾವ್ ಆಗಿದ್ದಾನೆ.