ಶಿವಮೊಗ್ಗದ ಶಾಂತಿನಗರದ ಬಂಗಾರಪ್ಪ ಬಡಾವಣೆಯ ಶ್ರೀ ವಿಜಯ ಗಣಪತಿ ದೇವಸ್ಥಾನದ ಹುಂಡಿ ತೆರೆದಾಗ ಭಕ್ತರಿಗೆ ಆಘಾತ ಕಾದಿತ್ತು. ಹುಂಡಿಯಲ್ಲಿದ್ದ ಮುಕ್ಕಾಲು ಭಾಗದಷ್ಟು ನೋಟುಗಳನ್ನು ಇಲಿಗಳು ಕಡಿದು ಹಾಕಿದ್ದವು. 100, 50, 20 ಹಾಗೂ 10ರ ಮುಖಬೆಲೆಯ ನೋಟುಗಳನ್ನು ಇಲಿಗಳು ಕಡಿದು ಹರಿದು ಹಾಕಿವೆ. ಸುಮಾರು 5,000 ದಿಂದ 6,000 ರೂ. ಮೊತ್ತದ ಹಣ ಹಾಳಾಗಿದೆ ಎಂದು ಅಂದಾ ದೇವಸ್ಥಾನದ ಮಂಡಳಿ ಅಂದಾಜಿಸಿದೆ.