ಶಿವಮೊಗ್ಗ ನಗರದ ಹರಕೆರೆ ಹಾಗೂ ಕಾಶಿಪುರ ಪ್ರದೇಶಗಳಲ್ಲಿ ಸಾರ್ವಜನಿಕರ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಮುಸಿಯವನ್ನು (ಕೋತಿ) ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಆರ್.ಎಫ್.ಒ ವಿಜಯಕುಮಾರ್ ನೇತೃತ್ವದಲ್ಲಿ ನಡೆದ ಯಶಸ್ವಿ ಕಾರ್ಯಾಚರಣೆಯಿಂದ ಮುಸಿಯ ಬಂಧನವಾಗಿದ್ದು, ಸರಣಿ ದಾಳಿಯಿಂದ ಕಂಗಾಲಾಗಿದ್ದ ಸ್ಥಳೀಯ ನಿವಾಸಿಗಳು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.