ರಸ್ತೆ ದಾಟುವಾಗ ಪೋಷಕರು ಮಕ್ಕಳ ಕೈಹಿಡಿದು ನಡೆಸದಿದ್ದೆ ಎಂಥಾ ಅಪಾಯ ಬಂದೊದಗಬಹುದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಅಪಘಾತವಾದ ಬಳಿಕ ಚಾಲಕನನ್ನು ನಿಂದಿಸಿದರೆ ಮಕ್ಕಳ ಉಸಿರು ಹಿಂದಿರುಗಿ ಬರದು. ಹಾಗಾಗಿ ರಸ್ತೆ ದಾಟುವಾಗ ಮಕ್ಕಳ ಕೈ ಹಿಡಿದು ದಾಟುವುದು ಉತ್ತಮ. ಈ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದ್ದು, ರಸ್ತೆ ದಾಟುವಾಗ ಬಾಲಕ ಅಮ್ಮನ ಕೈ ಬಿಡಿಸಿಕೊಂಡು ಓಡಿದ್ದು, ಕಾರೊಂದು ಡಿಕ್ಕಿ ಹೊಡೆದಿದೆ.