ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ಏಪ್ರಿಲ್ 06) ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರುಗೆ ಮತ ಹಾಕುವಂತೆ ಮನವಿದ್ದಾರೆ. ಇದೇ ವೇಳೆ ಸಿಎಂ ದಾವಣಗೆರೆಯ ಬೆಣ್ಣೆ ದೋಸೆ ಸವಿದಿದ್ದಾರೆ. ಬಳಿಕ ದಾವಣಗೆರೆ ವರೆಗೆ ಬಂದು ಬೆಣ್ಣೆದೋಸೆಯ ರುಚಿ ನೋಡದಿದ್ರೆ ಮನಸ್ಸು ಒಪ್ಪುತ್ತಾ? ದಾವಣಗೆರೆಯ ಬೆಣ್ಣೆದೋಸೆ ಬರಿಯ ತಿನಿಸಲ್ಲ, ಅದೊಂದು ಸವಿಯಾದ ಅನುಭವ. ಎಂದು ಹೇಳಿಕೊಂಡಿದ್ದಾರೆ.