ಕಾಂಗ್ರೆಸ್ ನಾಯಕರ ವತಿಯಿಂದ ನೂತನ ಸಚಿವ ಸಂಪುಟ ರಚನೆಗೆ ಕಸರತ್ತು ಮುಂದುವರಿದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಯ ನಿವಾಸದಲ್ಲಿ ಸಭೆ ನಡೆಸಲು ಸಿದ್ಧರಾಗಿದ್ದಾರೆ. ಹೈಕಮಾಂಡ್ನ ದೂರವಾಣಿ ಕರೆಗಾಗಿ ಸಿದ್ದರಾಮಯ್ಯ ಕಾತುರದಿಂದ ಕಾಯುತ್ತಿದ್ದು, ಕರೆ ಬಂದ ನಂತರ ಖರ್ಗೆ ನಿವಾಸಕ್ಕೆ ತೆರಳಲಿದ್ದಾರೆ. ಖಾತೆ ಹಂಚಿಕೆ ಕುರಿತು ನಿರ್ಧಾರಗಳು ಇನ್ನೂ ಗೌಪ್ಯವಾಗಿವೆ.