ಗರ್ಭಾವಸ್ಥೆಯಲ್ಲಿ ಎಷ್ಟು ಜಾಗರೂಕರಾಗಿದ್ದರೂ ಕೂಡ ಸಾಲುವುದಿಲ್ಲ. ಅದರಲ್ಲಿಯೂ ಡೆಲಿವರಿ ಡೇಟ್ ಹತ್ತಿರ ಬರುವಾಗ ಸಹಜವಾಗಿ ಭಯ, ಗೊಂದಲ ಎಲ್ಲವೂ ಕಂಡುಬರುವುದರಿಂದ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಜೊತೆಗೆ ಹೆರಿಗೆ ನೋವು ಬರುವ ಮುನ್ನ ಕಂಡುಬರುವ ಲಕ್ಷಣಗಳ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಈ ಬಗ್ಗೆ ಶಾಂತಿಗೈನೆಕ್ನ ಸ್ತ್ರೀರೋಗ, ಪ್ರಸೂತಿ, ಬಂಜೆತನ ಹಾಗೂ ಲ್ಯಾಪರೋಸ್ಕೋಪಿಕ್ ತಜ್ಞರಾದ ಡಾ.ಶಿಲ್ಪ.ಜಿ.ಬಿ ಅವರು ಮಾತನಾಡಿದ್ದು ಹೆರಿಗೆ ನೋವು ಕಂಡು ಬರುವ ಮೊದಲು ಯಾವ ರೀತಿ ದೇಹ ಸೂಚನೆ ನೀಡುತ್ತದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋವನ್ನು drshilpagbkannada ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬೇಕಾಗಿದೆ.