ಬೀಟ್ರೂಟ್ ರೊಟ್ಟಿ ಸರಳ ಮತ್ತು ಆರೋಗ್ಯಕರ ರೊಟ್ಟಿಯಾಗಿದ್ದು, ನೀವು ಯಾವುದೇ ಕರಿಯೊಂದಿಗೆ ಅಥವಾ ಮೊಸರಿನೊಂದಿಗೆ ಸಹ ಆನಂದಿಸಬಹುದು. ಇದರ ಬಣ್ಣ ತಟ್ಟೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತದೆ. ಹಾಗಾಗಿ ಮಕ್ಕಳಿಂದ ದೊಡ್ಡವರ ವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಬೀಟ್ರೂಟ್ ರೊಟ್ಟಿ ಒಂದು ಪೌಷ್ಟಿಕಾಂಶಯುಕ್ತ ಆಹಾರವಾಗಿರುವುದರಿಂದ ಯಾರೂ ಬೇಕಾದರೂ ಸೇವನೆ ಮಾಡಬಹುದಾಗಿದೆ. ಇದನ್ನು ಸಿಂಪಲ್ ಆಗಿ ಮಾಡುವುದನ್ನು maplekitchenofficial ಎಂಬ ಇನ್ಸ್ಟಾ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.