ಚಳಿಗಾಲದಲ್ಲಿ ಬಿಸಿಬಿಸಿಯಾಗಿ ತಿನ್ನಲು ಇದ್ದಲ್ಲಿ ಅದಕ್ಕಿಂತ ಖುಷಿ ಬೇರೆ ಏನೂ ಇಲ್ಲ. ಆದರೆ ದಿನನಿತ್ಯ ಒಂದೇ ರೀತಿಯ ತಿಂಡಿ ತಿನ್ನುತ್ತಿದ್ದರೆ ಯಾರಿಗೆ ತಾನೇ ಇಷ್ಟ ಆಗುತ್ತೆ ಹೇಳಿ. ವೆರೈಟಿ ಇದ್ದಷ್ಟು ಬಾಯಿಗೆ ಮನಸ್ಸಿಗೆ ಎರಡಕ್ಕೂ ಬಹಳ ಖುಷಿಯಾಗುತ್ತದೆ. ಹಾಗಾದ್ರೆ ನೀವು nirrmla.nehhra ಎನ್ನುವವರು ಶೇರ್ ಮಾಡಿದ ಕಡಲೆಕಾಯಿ ಚಾಟ್ ಅನ್ನು ಒಮ್ಮೆ ಟ್ರೈ ಮಾಡಲೇ ಬೇಕು. ತುಂಬಾ ಸಿಂಪಲ್ ಆಗಿದ್ದು ಕ್ವಿಕ್ ಆಗಿ ಮಾಡಿಕೊಳ್ಳಬಹುದಾಗಿದೆ. ಅಷ್ಟು ಮಾತ್ರವಲ್ಲ, ಸವಿಯಲು ತುಂಬಾ ರುಚಿಕರವಾಗಿಯೂ ಇರುತ್ತದೆ. ಹಾಗಾದರೆ ಇನ್ನೇಕೆ ತಡ ನೀವು ಒಮ್ಮೆ ಟ್ರೈ ಮಾಡಿ ಟೇಸ್ಟ್ ಹೇಗಿದೆ ನೋಡಿ.