ಬೇಸಿಗೆಯಲ್ಲಿ ಆರೋಗ್ಯಕರ ಆಹಾರ ಸೇವನೆ ಮಾಡುವುದು ಬಹಳ ಒಳ್ಳೆಯದು. ಆದರೆ ಫೈಬರ್, ವಿಟಮಿನ್ ಸಿ ಮತ್ತು ಆರೋಗ್ಯಕರ ಕೊಬ್ಬಿನಿಂದ ಸಮೃದ್ಧವಾಗಿರುವ ಆಹಾರ ಒಂದೇ ಬೌಲ್ ನಲ್ಲಿ ಸಿಕ್ಕರೆ ಎಷ್ಟು ಒಳ್ಳೆಯದಲ್ಲವೇ. ಹೌದು, ಈ ಒಂದು ರೆಸಿಪಿ ಜೀರ್ಣಕ್ರಿಯೆಯನ್ನು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಚರ್ಮವನ್ನು ಕಾಂತಿಯುತವಾಗಿಸುತ್ತದೆ ಜೊತೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಹಾಗಾದರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.