ಮಹಾರಾಷ್ಟ್ರದ ಜಲಪಾತದಲ್ಲಿ ಮೋಜು ಮಾಡಲು ಹೋದ ಕುಟುಂಬವೊಂದಕ್ಕೆ ಅನಿರೀಕ್ಷಿತ ಮತ್ತು ಆಘಾತಕಾರಿ ಅನುಭವವಾಯಿತು. ಜಲಪಾತದ ಬಳಿಯ ಬಂಡೆಗಳ ಮೇಲೆ ಇದ್ದ ಬೃಹತ್ ಹಾವೊಂದು ಇದ್ದಕ್ಕಿದ್ದಂತೆ ಜಾರಿ ಮಗುವನ್ನು ಹೊತ್ತೊಯ್ಯುತ್ತಿದ್ದ ವ್ಯಕ್ತಿಯ ಹೆಗಲ ಮೇಲೆ ಬಿದ್ದಿತು. ಈ ಘಟನೆಯ ನಂತರ ಅಲ್ಲಿದ್ದ ಎಲ್ಲರೂ ಭಯಭೀತರಾಗಿ ಓಡಿಹೋದರು. ಮಹಾರಾಷ್ಟ್ರದ ಅಂಬೋಲಿ ಜಲಪಾತದಲ್ಲಿ ಈ ಘಟನೆ ನಡೆದಿದೆ.