ಶೂ ಒಳಗಡೆ ಸೇರಿಕೊಂಡು ಬೆಚ್ಚಗೆ ಮಲಗಿದ್ದ ಹಾವನ್ನು ಉರಗ ಸಂರಕ್ಷಕ ಸ್ನೇಕ್ ಶಿವು ರಕ್ಷಣೆ ಮಾಡಿರುವ ಘಟನೆ ಮೈಸೂರಿನ ಸಿಸಿ ಕ್ಲಬ್ನಲ್ಲಿ ನಡೆದಿದೆ. ಚಳಿಗಾಲ ಹಿನ್ನೆಲೆ ಹಾವುಗಳಿಗೆ ಬೆಚ್ಚಗಿರುವ ಜಾಗದ ಹುಡುಕಾಟ ನಡೆಸಲಿವೆ. ಹೀಗಾಗಿ ಈ ಸಮಯದಲ್ಲಿ ಶೂ ಧರಿಸುವ ಮುನ್ನ ಎಚ್ಚರಿಕೆ ಇರಲಿ ಎಂದು ಶಿವು ಮನವಿ ಮಾಡಿದ್ದಾರೆ. ಮೂರು ಅಡಿಯ ನೀರೊಳ್ಳೆ ಹಾವನ್ನು ರಕ್ಷಿಸಿದ ಅವರು, ಸುರಕ್ಷಿತ ಸ್ಥಳಕ್ಕೆ ಅದನ್ನು ರವಾನಿಸಿದ್ದಾರೆ.