ಬೆಂಗಳೂರಿನಲ್ಲಿರುವ ವಿಧಾನ ಸೌಧದ ಆವರಣದಲ್ಲಿ ಹಾವೊಂದು ಪ್ರತ್ಯಕ್ಷವಾಗಿರೋದು ಕೆಲ ಕಾಲ ಆತಂಕಕ್ಕೆ ಕಾರಣವಾಗಿದೆ. ವಿಧಾನಸೌಧದ ಉತ್ತರ ಗೇಟ್ ಬಳಿ ಹಾವು ಕಾಣಿಸಿಕೊಂಡ ಹಾವು, ಭದ್ರತಾ ಕೊಠಡಿಯೊಳಗೂ ನುಗ್ಗಿದೆ. ಬೃಹತ್ ಹಾವು ಕಂಡು ಮಹಿಳಾ ಪೇದೆ ಹೌಹಾರಿದ್ದು, ಬಳಿಕ ಸ್ಥಳಕ್ಕೆ ಬಂದ ಉರಗ ತಜ್ಞ ಹಾವಿನ ರಕ್ಷಣೆ ಮಾಡಿದ್ದಾರೆ.