ಸೋಂಪಿನ ಶರಬತ್ (Fennel Seeds Sharbat) ಬೇಸಿಗೆಯಲ್ಲಿ ದೇಹಕ್ಕೆ ತಂಪನ್ನು ನೀಡುವ ಅತ್ಯಂತ ಆರೋಗ್ಯಕರ ಪಾನೀಯವಾಗಿದೆ. ಬೇಸಿಗೆಯ ದಾಹ ತಣಿಸಿಕೊಳ್ಳಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಬೆಸ್ಟ್ ರೆಸಿಪಿಯಾಗಿದೆ. ಇದಕ್ಕೆ ಪುದೀನಾ ಮತ್ತಷ್ಟು ರುಚಿ ನೀಡುತ್ತದೆ. ಅಷ್ಟೇಅಲ್ಲ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಮಾಡಿ ಕುಡಿಯಬಹುದಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.