ಕರ್ನಾಟಕ ವಿಧಾನಸಭೆ ವಿಶೇಷ ಅಧಿವೇಶನದ ಸಂದರ್ಭ ಗುರುವಾರ ಶಾಸಕ ಪ್ರದೀಪ್ ಈಶ್ವರ್ಗೆ ಸ್ಪೀಕರ್ ಯುಟಿ ಖಾದರ್ ಟಾಂಗ್ ಕೊಟ್ಟರು. ರಾಷ್ಟ್ರಗೀತೆ ವಿಚಾರ ಮಾತನಾಡುವ ವೇಳೆ ಮಧ್ಯೆ ಪ್ರವೇಶಿಸಿದ ಪ್ರದೀಪ್ ಈಶ್ವರ್ ಬಿಜೆಪಿಯವರ ಕೈಗೆ ಕಬ್ಬಿಣ ಕೊಡಿ ಎಂದರು. ಆಗ ಸ್ಪೀಕರ್, ಅವರ ಕೈಗೆ ಕಬ್ಬಿಣ, ನಿನ್ನ ಕೈಗೆ ಹಗ್ಗ ಕೊಡಬೇಕು ಎಂದರು. ಆಗ ಸದನದಲ್ಲಿ ಎಲ್ಲರೂ ನಗಾಡಿದರು.