ವಿಶ್ವದ ಅತಿ ಎತ್ತರದ ಕಟ್ಟಡ ಹಾಗೂ ಯುಎಇ ದೇಶದ ಐಕಾನ್ ಎಂದೇ ಪ್ರಸಿದ್ಧವಾಗಿರುವ ದುಬೈಯ ಬುರ್ಜ್ ಖಲೀಫಾ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಭಾರತದ ತ್ರಿವರ್ಣ ಧ್ವಜ ಮತ್ತು ಮೋದಿಯವರ ಫೋಟೋಗಳ ಬೆಳಕಿನ ಪ್ರದರ್ಶನದೊಂದಿಗೆ ಮೈಮನ ಸೆಳೆಯುವಂತೆ ಕಂಗೊಳಿಸಿತು. ಯುಎಇ ಮತ್ತು ಭಾರತ ನಡುವಿನ ಗಟ್ಟಿಯಾದ ಸ್ನೇಹ ಹಾಗೂ ಪ್ರಧಾನಿ ಮೋದಿಯವರ ಮೇಲೆ ಯುಎಇ ಹೊಂದಿರುವ ಅಪಾರ ಗೌರವವನ್ನು ಈ ವಿಶೇಷ ಸಾಂಸ್ಕೃತಿಕ ಪ್ರದರ್ಶನವು ಎತ್ತಿಹಿಡಿದಿದೆ.