ಪ್ರಸಿದ್ಧ ಶ್ರೀ ನಿಮಿಷಾಂಬಾ ದೇಗುಲದಲ್ಲಿ ಇತ್ತೀಚೆಗೆ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ. ಕಳೆದ ಕೇವಲ 2 ತಿಂಗಳ ಅವಧಿಯಲ್ಲಿ ಭಕ್ತರಿಂದ ಒಟ್ಟು 49.44 ಲಕ್ಷ ರೂಪಾಯಿ ನಗದು ಕಾಣಿಕೆ ಸಂಗ್ರಹವಾಗಿದೆ. ಇದರೊಂದಿಗೆ 77 ಗ್ರಾಂ ಚಿನ್ನ ಹಾಗೂ 455 ಗ್ರಾಂ ಬೆಳ್ಳಿಯನ್ನು ಭಕ್ತರು ಹರಕೆಯ ರೂಪದಲ್ಲಿ ದೇವಿಗೆ ಸಮರ್ಪಿಸಿದ್ದಾರೆ. ಈ ಎಣಿಕೆ ಕಾರ್ಯದಲ್ಲಿ 70 ಕ್ಕೂ ಹೆಚ್ಚು ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು. ಸಂಪೂರ್ಣ ಪ್ರಕ್ರಿಯೆಯನ್ನು ಸಿಸಿ ಟಿವಿ ಕಣ್ಗಾವಲಿನಲ್ಲಿ ನಡೆಸಲಾಗಿದ್ದು, ಎಣಿಕೆಯಾದ ಹಣ ಮತ್ತು ಜಿನಸಿಗಳನ್ನು ಬ್ಯಾಂಕ್ಗೆ ಜಮೆ ಮಾಡಲಾಗಿದೆ.