ಬಾಗಲಕೋಟೆಯ ಇಳಕಲ್ನಲ್ಲಿ ಕಳ್ಳರ ಹಾವಳಿ ಮಿತಿ ಮೀರಿದ್ದು, ಕೈಯಲ್ಲಿ ಕಟರ್ ಹಿಡಿದ ನಾಲ್ಕು ಜನ ಮುಸುಕುಧಾರಿಗಳ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಗಳ ಕಾಂಪೌಂಡ್ ಹಾರುವ ದೃಶ್ಯ ಕೂಡ ರೆಕಾರ್ಡ್ ಆಗಿದ್ದು, ನಗರದ ವಿದ್ಯಾಗಿರಿ, ಕೆಹೆಚ್ ಡಿಸಿ ಕಾಲೋನಿಯಲ್ಲಿ ಘಟನೆ ನಡೆದಿದೆ. ಐದಾರು ಮನೆ ಬೀಗ ಮುರಿದು ಕಳ್ಳತನಕ್ಕೆ ಆರೋಪಿಗಳು ವಿಫಲ ಯತ್ನ ನಡೆಸಿದ್ದು, ಈ ವೇಳೆ ಮಹಿಳೆಯೋರ್ವರು ಕಿರುಚಾಡಿದ ಪರಿಣಾಮ ಕಲ್ಲು ಎಸೆದು ಕಳ್ಳರು ಎಸ್ಕೇಪ್ ಆಗಿದ್ದಾರೆ. ಕಲ್ಲೆಸೆತ ಹಿನ್ನೆಲೆ ಕೆಲವರಿಗೆ ಗಾಯ, ಮನೆ ಬಾಗಿಲುಗಳು, ಖುರ್ಚಿಗಳು ಜಖಂ ಆಗಿವೆ.