ಬೆಂಗಳೂರು ಶೈಲಿಯ ಸ್ಟ್ರೀಟ್ ಸ್ಟೈಲ್ ಮಸಾಲ ಪುರಿ ಮಾಡುವುದು ಬಹಳ ಸುಲಭ, ಬೇಯಿಸಿದ ಬಿಳಿ ಬಟಾಣಿ, ಮಸಾಲೆ ಪೇಸ್ಟ್ (ಈರುಳ್ಳಿ, ಟೊಮೆಟೊ, ಶುಂಠಿ-ಬೆಳ್ಳುಳ್ಳಿ, ಕೊತ್ತಂಬರಿ-ಪುದೀನಾ) ಮತ್ತು ಪಾನಿಪುರಿ ಪೂರಿಗಳಿಂದ ತಯಾರಿಸುವ ಟೇಸ್ಟಿ ಚಾಟ್. ಬೇಯಿಸಿದ ಬಟಾಣಿ ಗ್ರೇವಿ, ಹಸಿರು/ಹುಣಸೆ ಚಟ್ನಿ, ಈರುಳ್ಳಿ, ಕ್ಯಾರೆಟ್, ಸೇವ್ ಮತ್ತು ಪುದೀನಾ ಸೊಪ್ಪಿನೊಂದಿಗೆ ಬಿಸಿಬಿಸಿಯಾಗಿ ಬಡಿಸಿದಾಗ ಇದು ಅತ್ಯುತ್ತಮ ರುಚಿ ನೀಡುತ್ತದೆ. ಇದೊಂದು ಸರಳ ಪಾಕವಿಧಾನವಾದರೂ ಕೂಡ ತುಂಬಾ ರುಚಿಕರವಾಗಿರುತ್ತದೆ. ನೀವು ಕೂಡ ಮಸಾಲಪುರಿ ಪ್ರೀಯರಾಗಿದ್ದರೆ ಅಥವಾ ಅತಿಯಾಗಿ ತಿನ್ನುವವರಾಗಿದ್ದರೆ ಇದನ್ನು ಪ್ರಯತ್ನಿಸಿ. ಈ ರೆಸಿಪಿಯನ್ನು chefvinnyshukla ಎಂಬ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.