ಸುಧಾಮೂರ್ತಿ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ಹರಿದಾಡುತ್ತಿರುವ ನಕಲಿ ಹೂಡಿಕೆ ವಿಡಿಯೋಗಳ ಬಗ್ಗೆ ಸ್ವತಃ ಸುಧಾಮೂರ್ತಿ ಸ್ಪಷ್ಟನೆ ನೀಡಿದ್ದಾರೆ. ಡೀಪ್ಫೇಕ್ ವಿಡಿಯೋಗಳನ್ನು ನಂಬಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿರುವ ಘಟನೆಗಳು ವರದಿಯಾಗಿವೆ. ಇದು ನಕಲಿ ವಿಡಿಯೋ ಎಂದು ಸ್ಪಷ್ಟಪಡಿಸಿದ ಸುಧಾಮೂರ್ತಿ, ಸಾರ್ವಜನಿಕರು ಇಂತಹ ವಂಚನೆಗಳಿಂದ ಎಚ್ಚರವಾಗಿರಲು ಮನವಿ ಮಾಡಿದ್ದಾರೆ. ಹೂಡಿಕೆ ಮಾಡುವ ಮುನ್ನ ಸರಿಯಾದ ಮಾಹಿತಿ ಪಡೆಯಲು ಸೂಚಿಸಿದ್ದಾರೆ.