ಬೇಸಿಗೆ ಬಂದರೆ ಸಾಕು ಬಾಯಾರಿಕೆಯಾಗುವುದು ಬಿಟ್ಟು ಬೇರೆ ಏನು ತಿನ್ನಲೂ ಮನಸ್ಸಾಗುವುದಿಲ್ಲ ಆದರೆ ಸರಿಯಾದ ಆಹಾರ ಸೇವನೆ ಮಾಡದಿದ್ದರೆ ದೇಹಕ್ಕೆ ಶಕ್ತಿ ಎಲ್ಲಿಂದ ಸಿಗಲು ಸಾಧ್ಯ. ಹಾಗಾಗಿ ಆರೋಗ್ಯಕರ ಆಹಾರ ಸೇವನೆ ಮಾಡುವುದು ಕೂಡ ಮುಖ್ಯ. ನಿಮಗೂ ಕೂಡ ಹೊಟ್ಟೆ ತುಂಬಿದ ಭಾವನೆಯ ಜೊತೆಗೆ ಪ್ರೋಟೀನ್ ಕೂಡ ಸಿಗಬೇಕು ಅಂದ್ರೆ ನೀವು ಈ ಒಂದು ಆಹಾರವನ್ನು ಸೇವನೆ ಮಾಡಲೇಬೇಕು. ಹೌದು ಈ ಗ್ರಿಲ್ಡ್ ಚಟ್ನಿ ಪನೀರ್ ಜೊತೆಗೆ ಕ್ರೀಮಿ ಕುಂಬಳಕಾಯಿ ಸಲಾಡ್ ಮಾಡುವ ರೆಸಿಪಿಯನ್ನು bliss_is_food ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.