ಈ ಹಿಂದೆ ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ದತ್ತು ಪಡೆದರೆ ಮಾತ್ರ 12 ವಾರಗಳ ರಜೆ ಸಿಗುತ್ತಿತ್ತು. ಆದರೆ ಈಗ ಮಗುವಿನ ವಯಸ್ಸು ಎಷ್ಟೇ ಇರಲಿ, ದತ್ತು ಪಡೆದ ತಾಯಿಗೆ 12 ವಾರಗಳ (84 ದಿನಗಳು) ವೇತನ ಸಹಿತ ಮಾತೃತ್ವ ರಜೆ ನೀಡುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶಿಸಿದೆ.