ತಂದೂರಿ ಪನೀರ್ ಸ್ಯಾಂಡ್ವಿಚ್ ಒಂದು ರುಚಿಕರವಾದ ಮತ್ತು ಪ್ರೋಟೀನ್ ಭರಿತ ಉಪಹಾರವಾಗಿದ್ದು, ಇದನ್ನು ಮಸಾಲೆಯುಕ್ತ ಪನೀರ್ ಟಿಕ್ಕಾ, ತರಕಾರಿ ಮತ್ತು ಚೀಸ್ ಬಳಸಿ ತಯಾರಿಸಲಾಗುತ್ತದೆ. ಮೊಸರು, ತಂದೂರಿ ಮಸಾಲಾ ಮತ್ತು ಮಸಾಲೆ ಪದಾರ್ಥಗಳೊಂದಿಗೆ ಪನೀರ್ ಅನ್ನು ಮ್ಯಾರಿನೇಟ್ ಮಾಡಿ, ನಂತರ ಪ್ಯಾನ್ನಲ್ಲಿ ಹುರಿದು ಬ್ರೆಡ್ ಸ್ಲೈಸ್ಗಳ ನಡುವೆ ಇಟ್ಟು ಟೋಸ್ಟ್ ಮಾಡುವುದರಿಂದ ಈ ತ್ವರಿತ ಸ್ಯಾಂಡ್ವಿಚ್ ಮಾಡಿ ತಿನ್ನಬಹುದು ಅಷ್ಟೇಅಲ್ಲ, ಇದನ್ನು ಮಕ್ಕಳಿಗೂ ಕೊಡಬಹುದು. ಹಾಗಿದ್ರೆ ಇನ್ನೇಕೆ ತಡ ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.