ತೆಲುಗು ಖ್ಯಾತ ನಟ ಮಂಚು ಮನೋಜ್ ತಮ್ಮ ಕುಟುಂಬ ಸಮೇತರಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದ ನಟ ಮಂಚು ಮನೋಜ್ ಹಾಗೂ ಕುಟುಂಬಸ್ಥರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅರ್ಚಕರ ವತಿಯಿಂದ ನಟ ಮಂಚು ಮನೋಜ್ ಕುಟುಂಬಕ್ಕೆ ಮೈಲಾರ ವಸ್ತ್ರ ಹೊದಿಸಿ, ಪ್ರಸಾದ ನೀಡಿ ಗೌರವಿಸಲಾಯಿತು.