ಬೆಳಗಾವಿಯ ತೀವ್ರ ಬಿಸಿಲಿಗೆ ಪ್ರಾಣಿಗಳು ತತ್ತರಿಸಿದ್ದು, ನೀರು ಅರಸಿ ಕೋತಿಯೊಂದು ಸರ್ದಾರ್ ಮೈದಾನದ ಕ್ರಿಕೆಟ್ ಪಂದ್ಯಾವಳಿ ನಡುವೆಯೇ ವೇದಿಕೆಗೆ ಆಗಮಿಸಿತು. ಅಂಬೇಡ್ಕರ್ ಟ್ರೋಫಿ ಆಯೋಜಕರು ಬಾಟಲಿಯಿಂದ ನೀರು ಕುಡಿಸಿದಾಗ, ಕೋತಿಯು ಕುರ್ಚಿ ಮೇಲೆ ಬಿಂದಾಸ್ ಆಗಿ ಕುಳಿತು ನೀರು ಕುಡಿದು ದಾಹ ತೀರಿಸಿಕೊಂಡಿತು. ಈ ಅಪರೂಪದ ಮಾನವೀಯ ಘಟನೆ ಕ್ರೀಡಾಂಗಣದಲ್ಲಿದ್ದವರ ಗಮನ ಸೆಳೆಯಿತು.