ಹ್ಯಾಲೋವೀನ್, ಭೂತದ ವೇಷ ಧರಿಸುವ ಹಬ್ಬ. ಹಿಂದೆ ಭಾರತೀಯರಿಗೆ ಈ ಹಬ್ಬದ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಇದೊಂದು ವಿದೇಶದ ಹಬ್ಬವಾದ್ರೂ ಈಗ ನಮ್ಮ ದೇಶದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಅಕ್ಟೋಬರ್ 31ರಂದು ಹ್ಯಾಲೋವೀನ್ ಹಬ್ಬ ಆಚರಣೆ ಮಾಡಲಾಗ್ತಿದೆ. ಪೊಲೀಸ್ ನಾಯಿಯೊಂದು ದೆವ್ವದ ವೇಷ ತೊಟ್ಟು ಬರುತ್ತಿರುವವರನ್ನು ಅಚ್ಚರಿಯಿಂದ ನೋಡುತ್ತಿರುವ ವಿಡಿಯೋ ವೈರಲ್ ಆಗಿದೆ.