ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ಗೆ ಬಂದ ಇಂಡಿಗೋ ವಿಮಾನ 6E-231ರಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದೆ. ಲಖನೌನಿಂದ ಆಗಮಿಸಿದ ವಿಮಾನದಲ್ಲಿ ಹಾರಾಟದ ವೇಳೆ ಸಿಬ್ಬಂದಿಗೆ ಪತ್ರ ಸಿಕ್ಕಿದ್ದು, ರನ್ವೇ ಪಕ್ಕದಲ್ಲಿ ನಿಲ್ಲಿಸಿ ಶ್ವಾನ ದಳ, ಸಿಐಎಸ್ಎಫ್ ಮತ್ತು ಪೊಲೀಸರಿಂದ ತೀವ್ರ ತಪಾಸಣೆ ನಡೆಸಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರೇ ಪತ್ರ ಬರೆದಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ.