ಬೆಂಗಳೂರಿನ ಸಂಪಿಗೇಹಳ್ಳಿ, ಮಂಜುನಾಥ ಲೇಔಟ್ನಲ್ಲಿ ಭಾರಿ ಹಸು ಕಳ್ಳತನ ನಡೆದಿದೆ. ಲಕ್ಷ್ಮಣ್ ಎಂಬುವರಿಗೆ ಸೇರಿದ 4.5 ಲಕ್ಷ ರೂ. ಮೌಲ್ಯದ ಮೂರು ಹಸುಗಳನ್ನು ಡಿ.25ರ ಮಧ್ಯರಾತ್ರಿ ಐವರು ಕಳ್ಳರು ಮಿನಿ ಟೆಂಪೋದಲ್ಲಿ ಕದ್ದೊಯ್ದಿದ್ದಾರೆ. ಮನೆ ಬಳಿಯ ಖಾಲಿ ಜಾಗದಲ್ಲಿ ಕಟ್ಟಿದ್ದ ಹಸುಗಳು ಬೆಳಗ್ಗೆ ನಾಪತ್ತೆಯಾಗಿದ್ದು, ಸಿಸಿಟಿವಿ ಪರಿಶೀಲನೆ ವೇಳೆ ಕಳ್ಳತನ ಬಯಲಾಗಿದೆ.