ಚಿಕ್ಕಮಗಳೂರು ತಾಲೂಕಿನ ಮರ್ಲೆ ಸಮೀಪ ಹುಲಿ ಓಡಾಟ ಕಂಡುಬಂದಿದೆ. ಕಲ್ಲು ಕ್ವಾರಿ ಸೇರಿದಂತೆ ಸುತ್ತಮುತ್ತ ಹುಲಿ ಓಡಾಡುತ್ತಿದ್ದು, ಸ್ಥಳೀಯರೊಬ್ಬರ ಮೊಬೈಲ್ನಲ್ಲಿ ಸರೆಯಾಗಿದೆ. ಇದರಿಂದ ಮರ್ಲೆ, ಕಳಸಾಪುರ, ನಾಗರಹಳ್ಳಿಯ ಗ್ರಾಮಸ್ಥರಲ್ಲಿ ಅತಂಕ ಮನೆ ಮಾಡಿದ್ದು, ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚಿಸಿದೆ.