ಕೊಡಗು ಜಿಲ್ಲೆಯ ಮಡಿಕೇರಿಯ ವಿರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ಹುಲಿ ಕಾಣಿಸಿದೆ. ವಿರಾಜಪೇಟೆ-ಗೋಣಿಕೊಪ್ಪಲು ಹೆದ್ದಾರಿಯಲ್ಲಿ ಕೊಳತ್ತೋಡು ಗ್ರಾಮದ ಬಳಿ ವಿರಾಜಪೇಟೆ ಪುರಸಭಾ ಸದಸ್ಯ ಮಹಮ್ಮದ್ ರಫಿ, ನಯಾಜ್ ಎಂಬುವವರು ಕಾರಿನಲ್ಲಿ ಹೋಗುತ್ತಿದ್ದಾಗ ವ್ಯಾಘ್ರ ರಸ್ತೆ ದಾಟಿರುವುದು ಕಾಣಿಸಿದೆ. ಸದ್ಯ ಹುಲಿಯ ವಿಡಿಯೋ ವೈರಲ್ ಆಗುತ್ತಿದ್ದು, ಕೊಳತ್ತೋಡು ನಿವಾಸಿಗಳು ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ.