ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣವಾದ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಮೂರು ಹುಲಿಗಳು ಪ್ರತ್ಯಕ್ಷವಾಗಿವೆ. ಅರಣ್ಯ ವಲಯ ವ್ಯಾಪ್ತಿಯಲ್ಲಿರುವ ಸಚಿವ ಕೆ.ಜೆ. ಜಾರ್ಜ್ ಒಡೆತನದ ಏಳುನೂರು ಖಾನ್ ಕಾಫಿ ಎಸ್ಟೇಟ್ನಲ್ಲಿ ರಾತ್ರಿ ವೇಳೆ ಹುಲಿಗಳು ಓಡಾಡುತ್ತಿರುವ ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ. ಕಾಫಿ ತೋಟದಲ್ಲಿ ಹುಲಿಗಳ ಮುಕ್ತ ಸಂಚಾರದಿಂದಾಗಿ ತೋಟದ ಕಾರ್ಮಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಾರಿ ಆತಂಕ ಎದುರಾಗಿದೆ.